Friday 27 December 2013

The Bhagavath Geeta Saara

Vyasa Raja or Vyasa Theertha was initially a disciple of Bramanye Theertha of Abbur. He was born in Bannur near Mysore sometime in 1447 and he first became a disciple of Bramanye Theertha who later sent him for further studies to Sripadaraja of Mulabagal.
Even today, there is a small cave in the Sripadaraja matha in Mulabagal where Sripadaraja taught Vyasa Raja. The matha has also a Hanuman consecrated by Vyasaraja and this is one of the 732 Hanuman idols he consecrated all over India.
Vyasa Raja was the Raja Guru of six Emperors of the Vijayanagar dynasty. He was also the Chancellor of Vijayanagar University which had 10,000 students. He composed several works when he stayed at Hampi or Vijayanagar.
He was a master of Dwaitha and he is ranked alongside Madhwacharya and Jayatheertha in scholarship and literary erudition.
He was a great devotee of Krishna and once Sripadaraja found the Gopalakrishna idol dancing in his matha in Mulabagal even as Vyasa Raja was totally immersed in singing. Sripadaraja then handed over the idol of Gopalakrishns to Vyasa Raja and this is the main idol of the Sosale Vyasaraja Matha. This idol is still with the seers of the Matha and it can be seen even today.
Vyasa Raja performed the pooja of Srinivasa in Tirupathi for twelve years. He also visited Udupi and composed Krishna Nee Begana Baro when he saw the idol of Krishna consecrated by Madhwacharya.
He wrote under the ankita Krishna and subsequently as Sri Krishna. He was the founder of both the Dasa and the Vyasa Koota. If the Dasa Koota was a poetic expression of devotion to Hari, the Vyasa Koota was a philosophical stream.
Scholars classify his works into nine major works which includes  Nyâyâmrta, TarkatâNDava, and Chandrika. These three works are  collectively known as Vyâsa Traya. In is in his magnum opus, Nyâyâmrta, that he justifies the philosophy of Tattvavâda or Dwaitha. Here, he argues against Adwaitha thought and its concept of Maya. He says monism is untenable and that the world is as real as man.
A renowned debater, he distinguished himself at the court of the Vijayanagar Emperor, Saluva Narasimha, when he defeated several opponents in philosophical debates in Chandragiri near Tirupathi.
He was a magnanimous person and he never imposed his school of thought or philosophy on others, including even those he had defeated in debates. This is the reason he was highly respected by Kings and scholars from other schools, including Appayya Dikshita, Pakshadhara Mishra, Madhusûdana Saraswati, and Basava Bhatta.
Yusuf Adil Shah, the ruler of the Adil Shah dynasty of Bijapur and even the Mughal Emperor, Babur, honored Vyasa Raja with umbrella and showered him with gifts.  Portuguese visitors paid Vyasa Raja the respect due to a Raja Guru and they have eulogized him in all their writings as a learned Brahmin whose words the Emperors paid heed to.
The previous avatar of Raghavendra Swamy,Vyasa Raja composed the Bhagavath Geeta Saara.
The lyrics of this composition in Kannada is as follows:  

ಕೇಳಯ್ಯ ಎನ್ನ ಮಾತು ಪಾರ್ಥನೆ ಗೀತಾದರ್ಥನೆ ||||
ಶ್ಲೋಕ |  
ಕುರುಕ್ಷೇತ್ರದಿ ಎನ್ನವರು ಪಾಂಡವರು
ಪೇಳೋ ಸಂಜಯಾ ಏನು ಮಾಡುವರು ಕೂಡಿ |
ಕೇಳಯ್ಯ ಅರಸನೆ ನೋಡಿ ಪಾಂಡವರ ಸೇನಾ|
ಮಾತನಾಡಿದ ನಿನ್ನ ಸುತ ದ್ರೋಣಗಿಂತು ||

ಪಲ್ಲವಿ|  
ಕೇಳಿ ತಾ ಪಾರ್ಥನು ಕುರು ದಂಡ
ರಣದಲಿ ಚಂಡ | ಗಾಂಡೀವ ಕರದಂಡ
ಅಚ್ಯುತ ಪಿಡಿರಥ ನಡೆ ಮುಂದ
ಬಹು ತ್ವರದಿಂದ | ನೋಡುವೆ ನೇತ್ರದಿಂದ ||
ಗುರುಹಿರಿಯರ ಕೂಡ ಯಾಕೆಂದ
ಯುದ್ಧ ಸಾಕೆಂದ | ಭಿಕ್ಷವೆ  ಸುಖವೆಂದ||
ಕುಂತಿಸುತ ಮಾತು ಉಚಿತಲ್ಲ
ನಿನಗಿದು ಸಲ್ಲ | ಪಿಡಿ ಗಾಂಡೀವ ಬಿಲ್ಲ        ||||

ಶ್ಲೋಕ|  
ಬಾಲ್ಯ ಯೌವನ ಮುಪ್ಪುತನ ದೇಹದಲ್ಲಿ
ಇಂಥ ದೇಹಕೆ ಮೋಹ ಮತ್ತ್ಯಾಕಿಲ್ಲಿ|
ಕಾಯ್ದು ಕೊಲ್ಲುವ ನಾನು ಇರುತಿರಲು ಇಲ್ಲಿ
ಬಿಲ್ಲು ಪಿಡಿದು ಕೀರ್ತಿಪಡೆ ಲೋಕದಲ್ಲಿ ||
 
ಪಲ್ಲವಿ|  
ಶಸ್ತ್ರದಂಜಿಕೆಯಿಲ್ಲ ಜೀವಕ್ಕೆ
ದೇಹಕ್ಕೆ| ಪಾವಕನ ದಾಹಕ್ಕೆ |
ಉದಕಗಳಿಂದ ವೇದನೆಯಕ್ಕೆ
ಜೀವಕ್ಕ | ಮಾರುತನ ಶೋಷಕ್ಕೆ
ನಿತ್ಯ ಅಭೇದ್ಯ ತಾ ಜೀವನ
ಸನಾತನ| ವಸ್ತ್ರದಾಂಗೆ ತನವು |
ನನಗಿಲ್ಲಯ್ಯ|ಅದನಾ ಬಲ್ಲೆನಯ್ಯಾ            ||||

ಶ್ಲೋಕ|
ಜ್ಞಾನ ದೊಡ್ಡದು ಕರ್ಮಬಂಧನವ  ಬಿಟ್ಟು
ಕರ್ಮ ಬಿಟ್ಟರೆ ಪ್ರತ್ಯವಾಯವದೆಷ್ಟು |
ಫಲ ಬಿಟ್ಟು ನೀ ಮಾಡು ಸತ್ಕರ್ಮಗಳ
ಸಮ ದೇಹಕೆ ಫಲಕರ್ಮ ಕಾರಣವಲ್ಲ ||
ಪಲ್ಲವಿ | ಕರ್ಮದಲ್ಲೆ ನಿನಗಧಿಕಾರ
ಫಲ ತಾ ದೂರ| ಧನುಂಜಯಗೋಸ್ಕರ|
ಇತ್ತ ಬಾರಯ್ಯ | ಯೋಗಬುದ್ಧಿ ಮಾಡಯ್ಯ|
ಜಿತ ಬುದ್ಧಿ ಯಾವುದೈ ಕೇಶವ
ಜಗತ್ಪಾಶವ | ನೋಡದೇ ಪರಮೇಶ |
ಗೋವಿಂದನಲಿ ಮನವಿಟ್ಟವ
ಕಾಮ ಬಿಟ್ಟವ ಜಿತ ದೇಹ ತಾನಾದಾ            ||||

ಶ್ಲೋಕ|  
ಜ್ಞಾನ ದೊಡ್ಡದು ಕರ್ಮದಲ್ಲ್ಯಾಕೆ ಎನ್ನ
ಬುದ್ಧಿ ಮೋಹಿಸಿ ಕೃಷ್ಣ ಕೇಳಯ್ಯ ಬಿನ್ನಪ||
ಕರ್ಮವಿಲ್ಲದೆ ಮೋಕ್ಷವುಂಟೆ ಇನ್ನು
ಕರ್ಮ ಮೋಕ್ಷದ ಬುದ್ಧಿಗೆ ಬೀಜವಲ್ಲೆ||
ಪಲ್ಲವಿ |
ಯುದ್ಧ ಕರ್ಮವ ಮಾಡೋ ಪಾಂಡವ
ರಣ ತಾಂಡವ | ವೈರಿ ಷಂಡನೆಂಬುವ|
ಜನರೆಲ್ಲ ಮಾಳ್ಪರೋ ನಿನ್ನ ನೋಡಿ
ಮತ್ತೆನ್ನ ನೋಡಿ | ನೋಡಿದರ ನೀ ಬೇಡಿ |
ಎನಗ್ಯಾಕೆ ಪೇಳಯ್ಯ ಜನಕರ್ಮ
ಕ್ಷತ್ರಿಯ ಧರ್ಮ | ನಷ್ಟವಾಗುವದು ಧರ್ಮ|
ಅರ್ಪಿಸು ಎನ್ನಲ್ಲಿ ಸರ್ವವು
ಬಿಟ್ಟು ಗರ್ವವು | ತಿಳಿ ಎನ್ನೊಳು ಸರ್ವವು        ||||

ಶ್ಲೋಕ|
ಯೋಗ ಸನ್ಯಾಸ ಎರಡು ಮುಕ್ತಿಗೆ ಧೃಡವು
ಭೋಗವರ್ಜಿತ ಕೀಳು ಸನ್ಯಾಸಿಯಿರವು |
ಹೇಗೆ ಪದ್ಮಕೆ ವಾರಿಯ ಲೇಪವಿಲ್ಲ
ಹಾಗೆ ಭಕ್ತಿಗೆ ಸಂಸೃತಿಯ ಇಲ್ಲ ||
ಪಲ್ಲವಿ |
ಅಜನಲ್ಲಿ ದ್ವಿಜನಲ್ಲಿ ಗಜದಲ್ಲಿ
ಸಮನಾನಲ್ಲಿ| ಭಜಿಪರ ಮನದಲ್ಲಿ
ಮನಸು ಯಾರ ಜೀವಕೆ ಬಂದು
ಇತ್ತ ಬಾರೆಂದು | ಮತ್ತೆ ವೈರಿ ದಾರೆಂದು|
ಲೋಷ್ಟ ಕಾಂಚನ ನೋಡು ಸಮಮಾಡಿ|
ಆಸನ ಹೂಡಿ | ನಾಸಿಕ ತುದಿ ನೋಡಿ|
ಧ್ಯಾನ ಮಾಡು ಹರಿ ಅಲ್ಲಿಹ
ಅವನಲ್ಲಿಹ | ಯೋಗ ಸನ್ನಿಹಿತನವನೇ        ||||

ಶ್ಲೋಕ|
ಯಾರ ಭಕ್ತಿಯು ಎನ್ನ ಪಾದಾಬ್ಜದಲ್ಲಿ
ಘೋರ ಸಂಸಾರ ಯಾತನೆ ಅವರಿಗೆಲ್ಲಿ|
ಶರೀರವೆ ಕ್ಷೇತ್ರವೆಂತೆಂದು ತಿಳಿಯೋ||
ಪಲ್ಲವಿ ಶರೀರದೊಳಗಿದ್ದು ಪಾಪಿಲ್ಲ
ದುಃಖಲೇಪಿಲ್ಲ | ಆಕಾಶವು ಎಲ್ಲಾ|
ಮೂರು ಸದ್ಗುಣ |ಕೇಳೈಯ್ಯ ಫಲ್ಗುಣ|
ಸುಖದುಃಖ ಸಮಮಾಡಿ  ನೋಡು ನೀ |
ಈಡ್ಯಾಡು ನೀ| ಬ್ರಹ್ಮನ ನೋಡು ನೀ|
ಸೂರ್ಯ ಚಂದ್ರರ ತೇಜ ನನದಯ್ಯ
ಗುಡಾಕೇಶಯ್ಯ| ಅನ್ನ ಪಚನ ನನ್ನದಯ್ಯ        ||||

ಶ್ಲೋಕ|
ನಾನೇ ಉತ್ತಮ ಮನಸು ಎನ್ನಲ್ಲು ಮಾಡೋ
ಜ್ಞಾನ ಅಜ್ಞಾನ ಪೇಳುವೆ ತಿಳಿದು ನೋಡೋ
ಜ್ಞಾನ ದುರ್ಲಭ ಅವರ ಭಕ್ತಿಗಳಂತೆ
ನಾನು ಕೊಡುವೆನು ಫಲವ ಮನಸು ಬಂದಂತೆ||
ಪಲ್ಲವಿ ಸ್ಮರಣೆ ಮಾಡುತ ದೇಹ ಬಿಡುವರೋ
ನನ್ನ ಪಡೆವರೋ | ಬಲು ಭಕ್ತಿ ಮಾಡುವರೋ|
ಅನಂತ ಚೇತನ ಸುಳಿವೆನು
ಹರಿ ಸುಲಭನು | ಮತ್ತೆ ಜನನವಿಲ್ಲವಗೆ|
ಎನ್ನ ಭಕ್ತರಿಗಿಲ್ಲ ನಾಷವು
ಸ್ವರ್ಗದಾಶವು| ಬಿಟ್ಟು ಚರಣ ಭಕುತಿಯ        ||||

ಶ್ಲೋಕ|  
ಕೃಷ್ಣ ತೋರಿಸು ನಿನ್ನ ವಿಭೂತಿ ರೂಪ |
ಇಷ್ಟ ಪೂರ್ತಿಯ ಆಗಲೊ ಎನಗೆ ಶ್ರೀಪ|
ರಾಮ ನಾನಯ್ಯ ರಾಜರ ಗುಂಪಿನಲ್ಲಿ
ಸೋಮ ನಾನಯ್ಯ ರಾಜರ ಗುಂಪಿನಲ್ಲಿ
ಸೋಮ ನಾನಯ್ಯ ತಾರಕ ಮಂಡಲದಲಿ||
ಪಲ್ಲವಿ | ಅಕ್ಷರದೊಳಗೆ ಅಕಾರನು
ಗುಣಸಾರನು| ಪಕ್ಷಿಗಳಲಿ ನಾನು ಗರುಡನು|
ಸಕಲ ಜಾತಿಗಳಲ್ಲಿ
ಶ್ರೇಷ್ಟತನದಲಿ| ಎನ್ನ ರೂಪ ತಿಳಿಯಲ್ಲಿ|
ತೋರಿಸೋ ಶ್ರೀಕೃಷ್ಣ ನಿನ್ನ ರೂಪ|
ನಾನಾ ರೂಪ| ಅರ್ಜುನ ನೋಡೋ ರೂಪ|
ಕಂಡನು ತನ್ನನು ಸಹಿತದಿ |
ಹರಿ ದೇಹದಿ| ಬ್ರಹ್ಮಾಂಡಗಳಲ್ಲಿ        ||||

ಶ್ಲೋಕ|  
ಕ್ಷರ ಅಕ್ಷರ ಎರಡಕ್ಕೂ  ಉತ್ತಮನು ನಾನು|
ಗೋರ ನರಕದ ಲೋಭ ಕಾಮನು ನಾನು |
ಸಾರ ದಾನವು ಸಜ್ಜನರ ಹಸ್ತದಲ್ಲಿ
ಭೂರಿ ದಕ್ಷಿಣೆ ನೀಡೋ ಸತ್ಪಾತ್ರರಲ್ಲಿ ||
ಪಲ್ಲವಿ ಸರ್ವ ದಾನದಕಿಂತ ಎನಭಕ್ತಿ
ಕೇಳೊ ಭೂಶಕ್ತಿ | ಮಾಡಯ್ಯ ವರಕ್ತಿ |
ಕೃಷ್ಣ ಹರಣವಾಯ್ತು ನಿನ್ನಿಂದ
ಮೋಹ ಎನ್ನಿಂದ| ಬಹು ಸುವಾಕ್ಯ ದಿಂದ|
ಕೃಷ್ಣ ಭೀಮಾನುಜರ ಸಂವಾದ
ಮಹ ಸುಖಪ್ರದ| ಧೃತರಾಷ್ಟ್ರ ಕೇಳಿದ|
ಬಲ್ಲೆನು ವ್ಯಾಸರ ದಯದಿಂದ|
ಮನಸಿನಿಂದ| ಕೃಷ್ಣನಲ್ಲೇ ಜಯವೆಂದ        ||||


No comments:

Post a Comment